ಮುಖ ಪುಟ
ದಿನಾಂಕ:-15-8-1986 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಬೆಂಗಳೂರು ಜಿಲ್ಲೆಯಿಂದ ವಿಭಾಗಗೊಂಡಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಕರ್ನಾಟಕ ರಾಜ್ಯದ ಆಗ್ನೇಯ ದಿಕ್ಕಿನಲ್ಲಿದೆ. ಈ ಜಿಲ್ಲೆಯು 120 15'ದಿಂದ 130 35' ಅಕ್ಷಾಂಶ ಮತ್ತು 770 05' ದಿಂದ 780 ರೇಖಾಂಶಗಳ ನಡುವೆ ಇರುತ್ತದೆ. ಭೂಮಿಯ ಮೇಲ್ಮೈ ಸಮುದ್ರ ಮಟ್ಟದಿಂದ 629 ರಿಂದ 950 ಮೀಟರ್ ವ್ಯತ್ಯಾಸದ ಎತ್ತರದಲ್ಲಿರುತ್ತದೆ. ಈ ಜಿಲ್ಲೆಗೆ ದೇವನಹಳ್ಳಿ,ದೊಡ್ಡಬಳ್ಳಾಪುರ,ಹೊಸಕೋಟೆ ಮತ್ತು ನೆಲಮಂಗಲ ತಾಲ್ಲೂಕುಗಳು ಸೇರಿರುತ್ತವೆ.ಈ ಜಿಲ್ಲೆಯ ಉತ್ತರ ದಿಕ್ಕಿನಲ್ಲಿ ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳು, ದಕ್ಷಿಣ ದಿಕ್ಕಿನಲ್ಲಿ, ಕೋಲಾರ ಮತ್ತು ಚಿಕ್ಕಬಳ್ಳಾಫುರ ಜಿಲ್ಲೆ ಹಾಗೂ ಪಶ್ಚಿಮ ದಿಕ್ಕಿನಲ್ಲಿ ತುಮಕೂರು ಮತ್ತು ರಾಮನಗರ ಜಿಲ್ಲೆಗಳಿವೆ.
ಜಿಲ್ಲೆಯ ಭೂ ವಿಸ್ತಾರವು 5814 ಚ.ಕಿ.ಮೀ.ಗಳಿದ್ದು, ರಾಜ್ಯದ ವಿಸ್ತೀರ್ಣದಲ್ಲಿ ಶೆ3.02 ರಷ್ಟು ಪ್ರದೇಶವನ್ನು ಹೊಂದಿದ್ದು, ರಾಜ್ಯದಲ್ಲಿ 16ನೇ ಸ್ಥಾನ ಪಡೆದಿದೆ. ಈ ಜಿಲ್ಲೆಯಲ್ಲಿ ಪಿನಾಕಿನಿ, ಅರ್ಕಾವತಿ ನದಿಗಳು ಹರಿಯುತ್ತದೆ. ರೇಷ್ಮೆ,ಹಾಲು,ಹೂವು ಮತ್ತು ಕೈಮಗ್ಗದ ಚಟುವಟಿಕೆಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಪ್ರಸಿದ್ದವಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಮಣ್ಯ ಸ್ವಾಮಿ ದೇವಸ್ಥಾನ ಮತ್ತು ಶಿವಗಂಗೆ ಬೆಟ್ಟ, ನೆಲಮಂಗಲ ತಾಲ್ಲೂಕಿನಲ್ಲಿರುವ ವಿಜಯ ವಿಠಲ ದೇವಸ್ಥಾನ, ದೇವನಹಳ್ಳಿ ತಾಲ್ಲೂಕಿನಲ್ಲಿರುವ ಟಿಪ್ಪು ಸುಲ್ತಾನ ಕೋಟೆ ಇವುಗಳು ಪ್ರೇಕ್ಷಣೀಯ ಸ್ಥಳಗಳಾಗಿವೆ.

